ಮಂಗಳವಾರ, ಆಗಸ್ಟ್ 8, 2023

transfer

🍀🍀🍀🍀🍀🍀🍀🍀🍀🍀🍀🍀
🙏🙏🙏🙏🙏🙏🙏🙏🙏🙏🙏🙏
_*ವರ್ಗಾವಣೆ ಹೋರಾಟ ನಿಜಕ್ಕೂ ಅಭೂತಪೂರ್ವ ಯಶಸ್ಸು ಕಂಡಿದೆ*._
_*ನಿರೀಕ್ಷೆಗೂ ಮೀರಿದ ಅನುಕೂಲ ಈ ಬಾರಿಯ ವರ್ಗಾವಣೆಯಲ್ಲಿ ಆಗಿದೆ.*_
🔵🔵🔵🔵🔵🔵
_*ನಿಜಕ್ಕೂ ಈಗಿನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಸಾಹೇಬರು,ಉಪಮುಖ್ಯಮಂತ್ರಿ ಗಳಾದ ಶ್ರೀ ಡಿ.ಕೆ ಶಿವಕುಮಾರ್ ಸಾಹೇಬರು ಮತ್ತು ಶಿಕ್ಷಣ ಸಚಿವರಾದ ಶ್ರೀ ಮಧು ಬಂಗಾರಪ್ಪ ಸಾಹೇಬರನ್ನು ಎಷ್ಟು ಹೊಗಳಿದರೂ ಕಡಿಮೆಯೇ ಸರಿ.ಕಾರಣ ಇಂತಹ ಸರ್ಕಾರದಲ್ಲಿ ನಮಗೆಲ್ಲ ವರ್ಗಾವಣೆ ಸಿಕ್ಕಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ.ಹಾಗೆಯೇ ಮುಖ್ಯವಾಗಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಿತೇಶ್ ಕುಮಾರ್ ಸಿಂಗ್ ಸರ್,ಆಗಿನ ಆಯುಕ್ತರಾದ ಶ್ರೀ ವಿಶಾಲ್ ಸರ್,ಈಗಿನ ಆಯುಕ್ತರಾದ ಶ್ರೀಮತಿ ಬಿ.ಬಿ.ಕಾವೇರಿ ಮೇಡಂ. ನಿರ್ದೇಶಕರಾದ ಶ್ರೀ ಪ್ರಸನ್ನಕುಮಾರ್ ಸರ್ ಅವರಿಗೂ ವರ್ಗಾವಣೆಗೊಂಡ ಶಿಕ್ಷಕರ ಪರವಾಗಿ ಅನಂತ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ.*_
🌹🌹🌹🌹🌹🌹
_*ವರ್ಗಾವಣೆಗೊಂಡ ಶಿಕ್ಷಕರು ಖುಷಿಯಲ್ಲಿ ಭಾವನಾತ್ಮಕವಾಗಿ ಮಾತನಾಡುತ್ತಾ,ಅವರ ನೋವು ನಲಿವಿನ ವಿಚಾರವನ್ನು ಕಣ್ಣೀರಿನ ರೂಪದಲ್ಲಿ ಹೊರಹಾಕುತ್ತಿದ್ದಾರೆ.ಅವರ ಆ ಮಾತುಗಳನ್ನು ಕೇಳಿ ನಿಜಕ್ಕೂ ಧನ್ಯನಾದೆ.ಹೋರಾಟ ಯಶಸ್ವಿಯಾದಾಗ ಆ ಯಶಸ್ಸನ್ನು ಪಡೆಯಲು ಎಲ್ಲರೂ ತಾ ಮುಂದು ನಾ ಮುಂದು ಬರುತ್ತಿದ್ದಾರೆ.ಅದೇ ಹೋರಾಟ ದಿಕ್ಕೆಟ್ಟಾಗ ಮುಂದೆ ಬರಲು ಚಿಂತಿಸುತ್ತಿದ್ದರು.ಅಂತಹ ಸಂದಿಗ್ದ ಸಮಯದಲ್ಲಿಯೂ ನಿಜಕ್ಕೂ ಸಂಘದ ನಾಯಕರಾದ ಶ್ರೀ ನಾಗೇಶ್ ರವರು, ಚಂದ್ರಶೇಖರ್ ನುಗ್ಲಿಯವರು,ಚೇತನ್ ರವರು,ಮಲ್ಲಯ್ಯ ಗುತ್ತೆದಾರ್ ರವರು,ಮಹೇಶ್ ಹೂಗಾರ್ ರವರು,ಹರಿಹರ ವಿಧಾನಸಭಾ ಕ್ಷೇತ್ರದ ರಾಜಕೀಯ ಯುವ ನಾಯಕರಾದ ಶ್ರೀ ನಂದಿಗಾವಿ ಶ್ರೀನಿವಾಸ್ ರವರು,ಮಾಜಿ ಉಪ ಸಭಾಪತಿಯವರಾದ ಪುಟ್ಟಣ್ಣರವರು,ಕಲ್ಯಾಣ ಕರ್ನಾಟಕದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಶಶಿಲ್ ಜಿ.ನಮೋಶಿಯವರು,ಬಸವರಾಜ್ ಗುರಿಕರ್ ರವರು,ತಿಮ್ಮಯ್ಯ ಪುರ್ಲೆಯವರು,ಶಾಂತಾರಾಮ್ ರವರು,ಗುರುಸ್ವಾಮಿಯವರು,ರಾಜ್ಯದ ವರ್ಗಾವಣೆ ಆಕಾಂಕ್ಷಿತ ಶಿಕ್ಷಕರು ಪ್ರತ್ಯಕ್ಷವಾಗಿ/ಪರೋಕ್ಷವಾಗಿ ಅಪಾರ ಸಹಾಯ ಸಹಕಾರ ನೀಡಿದ್ದನ್ನು ಸ್ಮರಿಸುತ್ತೇನೆ*._
⚜️⚜️⚜️⚜️⚜️⚜️
_*ನಿದ್ದೆಗೆಟ್ಟು ತಿರುಗಾಡಿದ ಆ ರಾತ್ರಿಗಳೆಷ್ಟೋ?ಅಧಿಕಾರಿಗಳನ್ನು ಭೇಟಿ ಮಾಡಲು ಮಾಡಿದ ಪ್ರಯತ್ನವೆಷ್ಟೋ?ರಾಜಕೀಯ ನಾಯಕರು ಸಚಿವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಸುರಿಸಿದ ಬೆವರೆಷ್ಟೋ?ಈಗ ಹೋರಾಟ ಯಶಸ್ವಿಯಾಗಿದೆ.ಶಿಕ್ಷಕರ ಹೃದಯದಲ್ಲಿ ನನಗೊಂದು ಪುಟ್ಟ ಜಾಗ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ.ವರ್ಗಾವಣೆಗೊಂಡ ಶಿಕ್ಷಕರಿಗೆ ಅಭಿನಂದನೆ,ಶುಭಾಶಯಗಳನ್ನು  ತಿಳಿಸುತ್ತಾ ,ಸರ್ವರಿಗೂ ಅನಂತ ಅನಂತ  ಧನ್ಯವಾದಗಳನ್ನು ಅರ್ಪಿಸುತ್ತೇನೆ.*_
🤝🤝🤝🤝🤝🤝
ಇತಿ ತಮ್ಮ ಸೇವಾಕಾಂಕ್ಷಿಗಳು
*ಶ್ರೀ ಮಾಲತೇಶ್ ಬಬ್ಬಜ್ಜಿ*
ಮತ್ತು ವರ್ಗಾವಣೆ ಹೋರಾಟದ ಶಿಕ್ಷಕ ಬಳಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ